Woman and Child Welfare

Woman and Child Welfare

 

ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ICPS)


ಮಕ್ಕಳು ನಮಗೆ ಮುದನೀಡಿ, ಓಡಾಡುವ ಚೇತನಗಳು, ಇವರೇ ನಮ್ಮ ಸಮುದಾಯದ ದೊಡ್ಡ ಆಸ್ತಿ, ಮಕ್ಕಳು ಸುಖ, ಸಂತೋಷ ನೆಮ್ಮದಿ ಹಾಗೂ ತಮ್ಮ ಹಕ್ಕುಗಳೊಂದಿಗೆ ಕಲಿಯುವ ವಾತಾವರಣದಲ್ಲಿ ಬೆಳೆದು ಬರಬೇಕು. ಯಾವುದೇ ಪ್ರಸಂಗದಲ್ಲಿಯೂ ಮಕ್ಕಳು ಯಾವುದೇ ಒತ್ತಡಕ್ಕೆ ಬೀಳದೆ, ಬದುಕಬೇಕು. ಎಳೆ ವಯಸ್ಸಿನಲ್ಲಿ ದುಡಿಯದಂತೆ ಮುರುಟಿಹೋಗದ, ಅರ್ಥವಿಲ್ಲದ, ಭವಿಷ್ಯವಿಲ್ಲದ, ಕನಸಿಲ್ಲದ ಬದುಕನ್ನು ನಡೆಸದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರು ಮತ್ತು ಸರ್ಕಾರದ್ದಾಗಿದೆ.


ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ರೂಪಿಸಿ, ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲೆಯಲ್ಲಿ ಮಕ್ಕಳಿಗೆ ರಕ್ಷಣಾ ವಾತಾವರಣವನ್ನು ಕಲ್ಪಿಸಲು, ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ಅಭಿವೃದ್ಧಿಗೊಳಿಸಲು ಕಾರ್ಯನಿರ್ವಹಿಸುತ್ತಿದೆ.

ಯೋಜನೆಯ ಮುಖ್ಯ ಉದ್ದೇಶ:

ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳ ಉತ್ತಮ ಬೆಳವಣೆಗೆಗೆ ಪೂರಕವಾದ ವಾತಾರಣವನ್ನು ನಿರ್ಮಿಸುವುದು ಹಾಗೂ ಸಂಕಷ್ಟ ಸನ್ನಿವೇಶಗಳಿಂದಾಗಿ ಕುಟುಂಬಗಳಿಂದ ಬೇರ್ಪಡುವ ಮಕ್ಕಳ ದುರುಪಯೋಗ, ನಿರ್ಗತಿಕ ಮತ್ತು ಶೋಷಣೆಗೆ ಇಡಾಗದಂತೆ ತಡೆಯುವ ಉದ್ದೇಶವನ್ನು ಹೊಂದಿದೆ.

ಐ.ಸಿ.ಪಿ.ಎಸ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಅಧಿನಿಯಮ-2000ಅನ್ವಯ ಎಲ್ಲಾ ಮಕ್ಕಳಿಗೂ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನು ಹಾಗೂ ಪ್ರತಿಯೊಂದು ಮಗುವೂ ತನ್ನ ಪೂರ್ಣ ಸಾಮರ್ಥ್ಯದಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಡುವ ದೃಷ್ಟಿಕೋನವನ್ನು ಹೊಂದಿದ್ದು, ಮಕ್ಕಳ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಗುಣಾತ್ಮಕ ಮತ್ತು ಅರ್ಪಣ ಮನೋಭಾವದಿಂದ ಕೆಲಸ ಮಾಡುವ ಅಧಿಕಾರಿ/ಸಿಬ್ಬಂದಿ ವರ್ಗದ ಮೂಲಕ ರಾಷ್ಟ್ರಾದಂತ್ಯ ಮಕ್ಕಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಸುರಕ್ಷಿತ ಜಾಲವನ್ನು ಸೃಷ್ಟಿಸುವ ಪ್ರಾಥಮಿಕ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ.

  • ರಕ್ಷಣೆ ಮತ್ತು ಪೋಷನೆ ಅಗತ್ಯವಿರುವ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾಗ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಥಿಕ ಸೇವೆಗಳನ್ನು ಒದಗಿಸುವುದು.
  • ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ ಕಾಯ್ದೆ 2000, ತಿದ್ದುಪಡಿ 2006ನ್ನು ಸಮರ್ಪಕವಾಗಿ) ಅನುಷ್ಠಾನಗೊಳಿಸುವುದು.
  • ಸ್ವದೇಶಿ ದತ್ತು ಕಾರ್ಯಕ್ರಮವನ್ನು ಉತ್ತೇಜಿಸುವುದು. ಮಕ್ಕಳಿಗೆ ಸೂಕ್ತ ನೆಲೆ ಒದಗಿಸುವ ಕಾರ್ಯಕ್ರಮ (ಶಿಶುಗೃಹ/ದತ್ತು ಸಂಸ್ಥೆ).
  • ನಗರ/ಅರೆನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆಗಾಗಿ ತಂಗುದಾಣಗಳ ಸ್ಥಾಪನೆ.
  • ಮಕ್ಕಳಿಗೆ ಆಶ್ರಯ ನೀಡಿರುವ ಸಂಘ/ಸಂಸ್ಥೆಗಳನ್ನು ಜೆ.ಜೆ ಕಾಯ್ದೆಯಡಿ ನೋಂದಾವಣೆ.
  • ಮಕ್ಕಳ ಸಹಾಯವಾಣಿ ಮೂಲಕ ಮಕ್ಕಳ ರಕ್ಷಣೆ.
  • ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ ಮೂಡಿಸುವುದು.
  • ಅಸಾಂಸ್ಥಿಕ ಸೇವೆಗಳ ಮೂಲಕ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುವುದು.
  • ಮಕ್ಕಳ ಸಾಗಣೆ ತಡೆ, ಭಿಕ್ಷಾಟನೆ ನಿರ್ಮೂಲನೆ, ಬಾಲ ಕಾರ್ಮಿಕತೆ ಮತ್ತು ಬಾಲ್ಯ ವಿವಾಹ ಹಾಗು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಜಾಗೃತಿ ಮೂಡಿಸುವುದು.
  • ಕಾಣೆಯಾದ ಮಕ್ಕಳ ಪತ್ತೆಗಾಗಿ ಅಂತರ್ ಜಾಲ ತಾಣದಲ್ಲಿ ಮಾಹಿತಿ ಅಳವಡಿಸಿ, ಅಂತಹ ಮಕ್ಕಳ ಪತ್ತೆಗೆ ನೆರವಾಗುವುದು.

ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ (District Child Protection Unit) ಪ್ರಾಯೋಜಕತ್ವ ಕಾರ್ಯಕ್ರಮ (Sponsorship Program)
ಮಕ್ಕಳ ಕಲ್ಯಾಣ ಸಮಿತಿ (Child Welfare Committee) ವಿಶೇಷ ಪಾಲನಾ ಯೋಜನೆ (Special Care Plan) OVC